ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ಧನಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಅರ್ಚಕ ಲಕ್ಷ್ಮೀಶ ಅವರ ನೇತೃತ್ವದಲ್ಲಿ 10ರಿಂದ 500 ರೂ.ವರೆಗಿನ ನೋಟುಗಳನ್ನು ಬಳಸಿ ಗರ್ಭಗುಡಿಯನ್ನು ಅಲಂಕರಿಸಲಾಗಿದೆ. ಉತ್ತಮ ಮಳೆ ಬೆಳೆಗಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.