ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿ ಸಲಗ ಹಾಗೂ ಮಖ್ನಾ ಆನೆ ಸೆರೆಗೆ ಎರಡನೇ ದಿನವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ. ದುಬಾರೆ ಕ್ಯಾಂಪ್ನ ಕಂಜನ್, ಹರ್ಷ, ಧನಂಜಯ ಸೇರಿದಂತೆ ಐದು ಆನೆಗಳ ನೆರವಿನಿಂದ ಈ ಕಾರ್ಯಾಚರಣೆ ನಡೆಯುತ್ತಿದೆ. ಕಾಡಾನೆಗಳ ಗುಂಪಿನಿಂದ ಎರಡು ಪ್ರಮುಖ ಆನೆಗಳನ್ನು ಬೇರ್ಪಡಿಸಿ ಸೆರೆ ಹಿಡಿಯಲು ತಂತ್ರ ರೂಪಿಸಲಾಗಿದೆ.