ಹಣ್ಣುಗಳನ್ನು ಒಂದೇ ರೀತಿ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ನೀವು ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಚಟ್ಪಟಾ ಪೇರಳೆ ಪೈನಾಪಲ್ ಸಲಾಡ್ ರುಚಿಯಲ್ಲೂ ಬೆಸ್ಟ್ ಅಷ್ಟು ಮಾತ್ರವಲ್ಲ ಇದನ್ನು ಬಹಳ ಸುಲಭವಾಗಿ ಕ್ವಿಕ್ ಆಗಿ ಮಾಡಿ ಸವಿಯಬಹುದು. ಸ್ವಲ್ಪ ಸಿಹಿ, ಸ್ವಲ್ಪ ಖಾರ ತಿನ್ನುವುದಕ್ಕೆ ಮಜವಾಗಿರುತ್ತದೆ. ಸಿಹಿ, ಹುಳಿ ಮತ್ತು ಮಸಾಲೆಯುಕ್ತ ರುಚಿಯನ್ನು ಹೊಂದಿರುವ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ತಿನಿಸುಗಳಲ್ಲಿ ಇದು ಒಂದು. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು cookingguardians ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.