ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಕಂಡು ವಾಹನ ಸವಾರರು ತಬ್ಬಿಬ್ಬಾಗಿರುವ ಘಟನೆ ಚಾಮರಾಜನಗರ ಗಡಿಭಾಗ ತಮಿಳುನಾಡಿನ ಆಸನೂರಲ್ಲಿ ನಡೆದಿದೆ. ಆಸನೂರಿನಿಂದ ದಿಂಬಂಗೆ ಹೋಗುವ ಹೆದ್ದಾರಿ ಬದಿಯಲ್ಲೇ ಚಿರತೆ ಕಂಡುಬಂದಿದ್ದು, ನಡು ರಸ್ತೆಯಲ್ಲೇ ಮಳೆ ನೀರನ್ನ ಕುಡಿದು ದಣಿವಾರಿಸಿಕೊಂಡಿದೆ. ಈ ದೃಶ್ಯ ವಾಹನ ಸವಾರರ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.