ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಳೆ ನಡುವೆಯೂ ಕೊಡಗು ಜಿಲ್ಲೆಗೆ ಭೇಟಿ ನೀಡಿದರು. ಸಿಎಂ ಆಗಿ ಅವರ ಮೊದಲ ಕೊಡಗು ಭೇಟಿ ಇದಾಗಿದ್ದು, ಭಾಗಮಂಡಲದಲ್ಲಿ ಕಾಪ್ಟರ್ ಮೂಲಕ ಬಂದಿಳಿದರು. ಕೊಡವ ಸಂಪ್ರದಾಯದಂತೆ ಅವರನ್ನು ಸ್ವಾಗತಿಸಲಾಯಿತು. ನಂತರ, ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು.