ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಟ್ಟುಹೋಗಿದ್ದ ವಾಚ್ ಕಟ್ಟಿದ್ದ ಪ್ರಸಂಗ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ವೇದಿಕೆಯಲ್ಲೇ ಸಿಎಂ ಬಳಿ ವಾಚ್ ಪಡೆದ ಜಿ.ಸಿ.ಚಂದ್ರಶೇಖರ್ ಅವರು ಅದನ್ನು ಸರಿಪಡಿಸಿ, ಟೈಂ ಸೆಟ್ ಮಾಡಿ ಹಿಂದಿರುಗಿಸಿದರು. ವಾಚ್ ಈಗ ಸರಿಯಾಗಿದೆಯಾ ಎಂದು ಗಮನಿಸಿದ ಸಿದ್ದರಾಮಯ್ಯ, ಬಳಿಕ ಅದನ್ನು ಕಟ್ಟಿಕೊಂಡಿದ್ದು ಸಭಿಕರ ಗಮನ ಸೆಳೆದಿದೆ.