ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ಭೀಕರ ಘಟನೆ ನಡೆದಿದೆ. ಅಂತರಧರ್ಮೀಯ ವಿವಾಹವಾದ ಮೊಮ್ಮಗಳ 40 ದಿನದ ಮರಿ ಮೊಮ್ಮಗನನ್ನು ಅಜ್ಜಿ ಮೆಹಬೂಬಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಮೊಮ್ಮಗಳ ದೂರಿನ ಮೇರೆಗೆ ಮೃತದೇಹವನ್ನು ಹೊರ ತೆಗೆದು ಪರೀಕ್ಷಿಸಿದಾಗ ಸತ್ಯ ಬಯಲಾಗಿದೆ. ಅಜ್ಜಿಯನ್ನು ಪೊಲೀಸರು ಬಂಧಿಸಿದ್ದು, ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.