ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನ ನೆತ್ತಿಚೌಕ ಗ್ರಾಮದ ಬಳಿ ಪಾಳುಬಿದ್ದ ತೊಟ್ಟಿಗೆ ಬಿದ್ದಿದ್ದ ಒಂದೂವರೆ ವರ್ಷದ ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ತೊಟ್ಟಿಯೊಳಗೆ ಮರದ ದಿಂಬುಗಳನ್ನು ಇಳಿಸುವ ಮೂಲಕ ಚಿರತೆ ಮರಿ ತಾನಾಗಿಯೇ ಸುರಕ್ಷಿತವಾಗಿ ಹೊರಬರುವಂತೆ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.