ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ರಾತ್ರಿ ಮಳೆ ಮತ್ತು ಬಿರುಗಾಳಿಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಕಳಸ ತಾಲೂಕಿನ ಕಲ್ಮಕ್ಕಿ ಹಿನಾರಿಯಲ್ಲಿ ವನಜಾಕ್ಷಿ ಎಂಬುವರ ಮನೆಯ ಮೇಲೆ ಬೃಹತ್ ಮರ ಬಿದ್ದಿದೆ.