ಚಿಕ್ಕಮಗಳೂರು ಭದ್ರಾ ಹುಲಿ ಸಂರಕ್ಷಿತಾರಣ್ಯದ ಕೇಶವೆಯ ಬ್ರಿಟಿಷ್ ಕಾಲದ ಪ್ರವಾಸಿ ಮಂದಿರಕ್ಕೆ ಒಂಟಿ ಸಲಗವೊಂದು ಭೇಟಿ ನೀಡಿದೆ. ನೂರು ವರ್ಷಗಳಿಗೂ ಹಳೆಯದಾದ ಈ ಮಂದಿರದ ಸುತ್ತ ಅರಣ್ಯ ಇಲಾಖೆ ಕಾಡಾನೆಗಳು ಬಾರದಂತೆ ಟ್ರೆಂಚ್ ನಿರ್ಮಿಸಿದ್ದರೂ, ವಾಹನ ಸಂಚಾರದ ರಸ್ತೆಯಿಂದ ಆನೆ ಒಳನುಗ್ಗಿದೆ. ಕೆಲಕಾಲ ಪ್ರವಾಸಿ ಮಂದಿರದ ಮುಂಭಾಗ ನಿಂತು ಆನಂತರ ತೆರಳಿದೆ. ಈ ಘಟನೆ ಸಫಾರಿ ಪ್ರವಾಸಿಗರ ಆಕರ್ಷಣೀಯ ಸ್ಥಳದಲ್ಲಿ ಸಂಭವಿಸಿದೆ.