ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಗ್ಗಸಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ. ತೋಟಗಳಲ್ಲಿನ ಹಲಸಿನ ಹಣ್ಣಿಗಾಗಿ ಲಗ್ಗೆ ಇಡುತ್ತಿರುವ ಈ ಆನೆಗಳಿಂದ ಬಾನಳ್ಳಿ ಮತ್ತು ಸಬ್ಬೆನಹಳ್ಳಿ ಸುತ್ತಮುತ್ತ ಭೀತಿ ಎದುರಾಗಿದ್ದು, ಆನೆಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.