ಚಿಕ್ಕಮಗಳೂರು ಭದ್ರಾ ಅಭಯಾರಣ್ಯದ ಲಕ್ಕವಳ್ಳಿಯಲ್ಲಿ ಪ್ರವಾಸಿಗರಿಗೆ ಅಪರೂಪದ ದೃಶ್ಯ ಸೆರೆಯಾಗಿದೆ. ಬೋಟ್ ಸಫಾರಿ ವೇಳೆ ಚಿರತೆ ಮತ್ತು ಬ್ಲಾಕ್ ಪ್ಯಾಂಥರ್ ಭದ್ರಾ ನದಿಯಲ್ಲಿ ಒಟ್ಟಾಗಿ ನೀರು ಕುಡಿದಿವೆ. ಈ ಅದ್ಭುತ ಪ್ರಸಂಗವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಭದ್ರಾ ಹುಲಿಸಂರಕ್ಷಿತಾರಣ್ಯದಲ್ಲಿ ವನ್ಯಜೀವಿಗಳ ಸಹಬಾಳ್ವೆಯ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ವಿಶಿಷ್ಟ ಘಟನೆ ರಾಜ್ಯಾದ್ಯಂತ ಗಮನ ಸೆಳೆದಿದೆ.