ಇಂದಿನ ವೇಗದ ಬದುಕಿನಲ್ಲಿ ಪೋಷಕರು ತಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳ ಸುರಕ್ಷತೆಯನ್ನು ಮರೆಯುತ್ತಿದ್ದಾರೆಯೇ? ಎಂಬ ಆತಂಕ ಮೂಡುತ್ತಿದೆ. ಬೆಂಗಳೂರಿನ ನಾಯಂಡಹಳ್ಳಿಯ ಒಂದೇ ಅಂತಸ್ತಿನ ಕಟ್ಟಡದಿಂದ ಮಗುವೊಂದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಇನ್ನೂ ಹಸಿಯಾಗಿರುವಾಗಲೇ, ಸಾಮಾಜಿಕ ಜಾಲತಾಣವಾದ 'ಎಕ್ಸ್' (X) ನಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವಿಡಿಯೋ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.