ಚಿಕ್ಕಬಳ್ಳಾಪುರ ನಗರದ ಪಿಳ್ಳಪ್ಪಿ ಕಾಂಪ್ಲೆಕ್ಸ್ನಲ್ಲಿರುವ ಬಟ್ಟೆ ಅಂಗಡಿಯ ಮೊದಲ ಮಹಡಿಯಿಂದ ಗ್ರಿಲ್ ಮೇಲೆ ಆಟವಾಡುತ್ತಿದ್ದ ನಾಲ್ಕು ವರ್ಷದ ಗಗನ್ ಸಿಂಧು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಪೋಷಕರು ಬಟ್ಟೆ ಖರೀದಿ ಮಾಡುತ್ತಿದ್ದಾಗ ನಡೆದಿದೆ. ಗಾಯಗೊಂಡ ಮಗುವಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.