ಮೈದಾ ಇಲ್ಲ, ಗ್ಲುಟನ್ ಇಲ್ಲ, ಸಂಸ್ಕರಿಸಿದ ಸಕ್ಕರೆ, ಎಣ್ಣೆ ಇದಾವುದೂ ಇಲ್ಲದೆಯೇ ಓಟ್ಸ್ ಮತ್ತು ತುಪ್ಪವನ್ನು ಬಳಸಿ ತಯಾರಿಸುವ ಈ ಚಾಕಲೇಟ್ ಕೇಕ್ ಆರೋಗ್ಯಕ್ಕೂ ಒಳ್ಳೆಯದು. ಅಷ್ಟು ಮಾತ್ರವಲ್ಲ ಮಾಡುವುದಕ್ಕೂ ಕೂಡ ಬಹಳ ಸುಲಭ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಾಡಿಕೊಡಬಹುದು. ಗ್ಲುಟನ್ ಫ್ರೀ ಆಗಿರುವುದರಿಂದ ಮಕ್ಕಳು ಎಷ್ಟೇ ತಿಂದರೂ ಯೋಚನೆ ಮಾಡುವ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲಿ ಯಾವುದೇ ಚಿಕ್ಕ ಸಮಾರಂಭಗಳಿದ್ದರು ಈ ರೆಸಿಪಿಯನ್ನು ಮಾಡಬಹುದು. ಇದನ್ನು ಸುಲಭವಾಗಿ ಮಾಡುವ ರೆಸಿಪಿಯನ್ನು kriti_kaur_dhiman ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.