ಕಬ್ಬಿಣದ ಸರಳುಗಳ ಮಧ್ಯೆ ಕುತ್ತಿಗೆ ಸಿಲುಕಿಸಿಕೊಂಡು ಒದ್ದಾಡುತ್ತಿದ್ದ ಹಸುವೊಂದನ್ನು CISF ಸೈನಿಕ ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಿಐಎಸ್ಎಫ್ ಸಿಬ್ಬಂದಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜವಾನ್ನ ಕ್ಷಿಪ್ರ ನಿರ್ಧಾರ ಮತ್ತು ಪ್ರಾಣಿದಯೆಗೆ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.