ಕೇಂದ್ರದಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಬಗ್ಗೆ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಯತ್ನಾಳ್ ನಡುವೆ ಜಟಾಪಟಿ ನಡೆದಿದೆ. ಯತ್ನಾಳ್ ಮಾತಾಡುವಾಗ ಮಧ್ಯಪ್ರವೇಶಿಸಿ ಸಿಎಂ, ಶೇ.10 ಮೀಸಲಾತಿ ಸಂವಿಧಾನ ವಿರೋಧಿ ನಿಲುವು ಎಂದಿದ್ದಾರೆ. ಸಂವಿಧಾನದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತ ಇದೆ, ಆರ್ಥಿಕವಾಗಿ ಹಿಂದುಳಿದವರಿಗೆ ಕೊಡಬೇಕು ಅಂತ ಇಲ್ಲ ಎಂದಿದ್ದಾರೆ.