ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿನ ಬೈ-ಎಲೆಕ್ಷನ್ಗಳ ಗೆಲುವಿಗೆ ಆಡಳಿತದ ಜನಮೆಚ್ಚುಗೆ ಕಾರಣವೆಂದರು. ಕೇರಳದಲ್ಲಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗೆದ್ದಿರುವುದು ಖುಷಿ ತಂದಿದೆ. ಆದರೆ, ತಮಿಳುನಾಡಿನಲ್ಲಿ ನಟ ವಿಜಯ್ ಅವರ ಪಕ್ಷ (ಟಿವಿಕೆ) ಇಷ್ಟೊಂದು ಸೀಟುಗಳನ್ನು ಗೆಲ್ಲುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.