ವಿಧಾನ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಾಲೆಳೆದ ಪ್ರಸಂಗ ನಡೆದಿದೆ. ಡಿಕೆಶಿ ಅವರ ನಯ ಮತ್ತು ವಿನಯದ ಮಾತಿನ ಬಗ್ಗೆ ಪ್ರಶ್ನೆ ಮಾಡಿರುವ ಬಿಜೆಪಿ ಶಾಸಕ, ಕಾಣದ ಕಡಲಿಗೆ ಹಂಬಲಿಸಿದೆ ಮನ, ಸೇರ ಬಲ್ಲೆನೆ ಒಂದು ದಿನ ಎಂಬ ಹಾಡೊಂದಿದೆ. ಆದ್ರೆ ಡಿಕೆಶಿ ಅವರ ಸ್ಥಿತಿ ಕಾಣುವ ಕುರ್ಚಿಗೆ ಹಂಬಲಿಸಿದೆ ಮನ, ಕೂರಬಲ್ಲನೇ ಒಂದು ದಿನ ಎಂಬಂತಾಗಿದೆ ಎಂದಿದ್ದಾರೆ.