ಡಾಬಾವೊಂದರ ಗೋಡೆಯ ಒಳಗೆ ಸೇರಿಕೊಂಡಿದ್ದ ನಾಗರ ಹಾವನ್ನು ರಕ್ಷಣೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿದೆ. ಪಟ್ಟಣದ ಪ್ರೆಂಡ್ಸ್ ಡಾಬಾದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಹಾವು ಕಾಣಿಸಕೊಂಡ ಕಾರಣ ಭಯಗೊಂಡಿದ್ದ ಸಿಬ್ಬಂದಿ ಅಂತಿಮವಾಗಿ ನಿರಾಳರಾಗಿದ್ದಾರೆ.