ಸಾರ್ವಜನಿಕ ಸಭೆಯಲ್ಲಿ ತಹಶೀಲ್ದಾರ್ ಡಿ.ಪಿ.ಶರತ್ ಕುಮಾರ್ ವಿರುದ್ಧ ಶಾಸಕ ಬಾಲಕೃಷ್ಣ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ. ಮಾಗಡಿ ತಹಶೀಲ್ದಾರ್ಗೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಶಾಸಕರು ಹೇಳಿದ್ದು, ಮಾಗಡಿ ತಾ.ಪಂ. ಕಚೇರಿಯಲ್ಲಿ ಜನರ ಕುಂದುಕೊರತೆ ಆಲಿಸುವ ಸಭೆ ವೇಳೆ ಘಟನೆ ನಡೆದಿದೆ. ಮಾತನಾಡದೆ ನಿಮಗೆ ಮುತ್ತಿಕ್ಕುತ್ತಾರಾ? ನಾಚಿಕೆ ಆಗಲ್ವಾ ನಿಮಗೆ. ಜನರನ್ನು ಯಾಕೆ ಕಚೇರಿಗೆ ಅಲೆಸಿ ಸಾಯಿಸುತ್ತೀರಾ ಎಂದು ಶಾಸಕರು ಕಿಡಿ ಕಾರಿದ್ದಾರೆ.