ಕೊತ್ತಂಬರಿ ಸೊಪ್ಪಿಲ್ಲದೆ ಅಡುಗೆ ಹೇಗ್ ಆಗುತ್ತೆ ಅಲ್ವಾ, ಸಾಮಾನ್ಯವಾಗಿ ಕೆಲವರು ಎಲ್ಲಾ ಅಡುಗೆಗೂ ಕೊತ್ತಂಬರಿ ಸೊಪ್ಪಿನ ಬಳಕೆ ಮಾಡುತ್ತಾರೆ. ಆದರೆ ದಿನ ದಿನ ತರುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಒಂದು ದಿನ ತಂದರೆ ಅದನ್ನು ಸರಿಯಾಗಿ ಸ್ಟೋರ್ ಮಾಡಿಟ್ಟುಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತದೆ. ನಿಮಗೂ ಕೂಡ ಈ ಸಮಸ್ಯೆ ಇದ್ದಲ್ಲಿ ನೀವು ಈ ಒಂದು ಟ್ರಿಕ್ ಪಾಲಿಸಿ ತಿಂಗಳುಗಟ್ಟಲೆ ಕೊತ್ತಂಬರಿ ಸೊಪ್ಪನ್ನು ಇಟ್ಟುಕೊಳ್ಳಬಹುದು. ಈ ವಿಡಿಯೋವನ್ನು the_everyday_shef ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಟ್ರೈ ಮಾಡುವ ಮೂಲಕ ತಿಂಗಳುಗಟ್ಟಲೆ ಕೊತ್ತಂಬರಿ ಸೊಪ್ಪನ್ನು ಸ್ಟೋರ್ ಮಾಡಬಹುದು.