ಚಳಿಗಾಲದ ಸಂಜೆಯಲ್ಲಿ ವಿವಿಧ ರೀತಿಯ ತಿಂಡಿಗಳ ಸೇವನೆ ಮಾಡಬೇಕೆಂಬ ಬಯಕೆಯಾಗುವುದು ಸಾಮಾನ್ಯ. ಆದರೆ ಸುಲಭವಾಗಿ, ರುಚಿಯಾಗಿ ಯಾವ ರೀತಿಯ ಆಹಾರಗಳನ್ನು ತಯಾರಿಸಬೇಕು ಎಂದು ತಲೆಬಿಸಿಯಾಗುತ್ತದೆ. ಕ್ರಿಸ್ಪಿಯಾಗಿ ಚಳಿಗೆ ಬಿಸಿ ಬಿಸಿಯಾಗಿ ತಿನ್ನಲು ನೀವೊಮ್ಮೆ ಕ್ರಿಸ್ಪಿ ಮಿರ್ಚಿ ಪಕೋಡ (ಗರಿಗರಿ ಮೆಣಸಿನಕಾಯಿ ಬಜ್ಜಿ) ಮಾಡಿ ನೋಡಬಹುದು. ಇದೊಂದು ಸಿಂಪಲ್ ವಿಧಾನವಾಗಿದ್ದು ಈ ವಿಡಿಯೋವನ್ನು vegasmrtv and indian_tadka_tv ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಕೂಡ ಇದನ್ನೊಮ್ಮೆ ಮಾಡಿ ನೋಡಿ.