ಸಂಜೆ ಏನಾದರೂ ತಿನ್ನಬೇಕು ಅಂತ ಅನ್ನಿಸಿದಾಗ ಈ ಒಂದು ರೆಸಿಪಿಯನ್ನು ತಪ್ಪದೆ ಮಾಡಿ ತಿನ್ನಿ. ಬೆಳ್ಳುಳ್ಳಿ ಮ್ಯಾರಿನೇಡ್ ಮಾಡಿದ ಪನೀರ್ ಸುತ್ತಲೂ ಸುತ್ತಿದ ಗರಿಗರಿಯಾದ ಆಲೂಗಡ್ಡೆ ಇವೆಲ್ಲಾ ಕಣ್ಣುಗಳಿಗೆ ಮಾತ್ರವಲ್ಲ ನಾಲಿಗೆಗೂ ಮಸ್ತ್ ರುಚಿ ನೀಡುತ್ತದೆ. ಮನೆಯಲ್ಲಿಯೇ ಪಾರ್ಟಿ ಮಾಡಲು ಮತ್ತು ಬೀದಿ ಆಹಾರಗಳ ಬದಲಿಗೆ ತ್ವರಿತವಾಗಿ ಮಾಡಿ ತಿನ್ನಬಹುದಾದ ಪಾಕವಿಧಾನ ಇದಾಗಿದೆ. ಹೊರಗೆ ಕುರುಕಲು, ಒಳಗೆ ಮೃದು ಒಟ್ಟಿನಲ್ಲಿ ಒಮ್ಮೆ ಮಾಡಿ ಸವಿಯಲೇ ಬೇಕಾದ ರೆಸಿಪಿ ಇದಾಗಿದೆ.