ವೀಕೆಂಡ್ ಬಂದರೆ ಸಾಕು ಮಕ್ಕಳಿಗೆ ಯಾವ ಚಾಟ್ ಮಾಡಿ ಕೊಡುವುದು ಎಂಬ ಚಿಂತೆ ಪೋಷಕರಿಗೆ ಕಾಡುವುದು ಸಹಜ. ಯಾವಾಗಲು ಏನಾದರೂ ವಿನೂತನ ಚಾಟ್ ಸವಿಯಲು ಬಯಸುವವರು ಈ ಒಂದು ಚಾಟ್ ಮಾಡಿ ಸವಿಯಬಹುದು. ಇದನ್ನು ಸಿಂಪಲ್ ಆಗಿ ಮಾಡಬಹುದು ಮತ್ತೆ ಮಾಡುವುದಕ್ಕೂ ಕೂಡ ಹೆಚ್ಚು ಪದಾರ್ಥಗಳು ಬೇಕಾಗುವುದಿಲ್ಲ. ಹಾಗಾದರೆ ಇನ್ನೇಕೆ ತಡ ಮಕ್ಕಳಿಗೆ ಒಮ್ಮೆ ಮಾಡಿ ಕೊಡಿ. ಇದನ್ನು ಮಾಡುವಾಗ ಹೆಚ್ಚಿನ ತರಕಾರಿಗಳನ್ನು ಸೇರಿಸಿಕೊಳ್ಳುವುದರಿಂದ ಅದನ್ನು ಆರೋಗ್ಯಕರ ಮತ್ತು ರುಚಿಕರವಾಗಿಸಿಕೊಳ್ಳಬಹುದು.