ಬೇಸಿಗೆಯಲ್ಲಿ ಪ್ಯಾಕ್ ಮಾಡಿಟ್ಟ ಜ್ಯೂಸ್ ಕುಡಿಯುವ ಬದಲು ಸೌತೆಕಾಯಿ, ಕಿವಿ ಮತ್ತು ಪೈನಾಪಲ್ ಹಾಕಿ ಕೂಲರ್ ಮಾಡಿ ಕುಡಿಯಬಹುದು. ಇದು ಆರೋಗ್ಯಕರ ಬೇಸಿಗೆಯ ಪಾನೀಯವಾಗಿದ್ದು, ಇದು ದೇಹಕ್ಕೆ ತಂಪನ್ನು ನೀಡುತ್ತದೆ. ಇದನ್ನು ತಯಾರಿಸಲು, ಬ್ಲೆಂಡರ್ನಲ್ಲಿ ಸಿಪ್ಪೆ ಸುಲಿದ ಕಿವಿ, ಸೌತೆಕಾಯಿ, ಅನಾನಸ್ ತುಂಡುಗಳು, ಸ್ವಲ್ಪ ಪುದೀನಾ, ನಿಂಬೆ ರಸ ಮತ್ತು ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಐಸ್ ಕ್ಯೂಬ್ ಹಾಕಿ ಕೂಲ್ ಆಗಿ ಕೂಲರ್ ಕುಡಿಯಬಹುದು. ಇದನ್ನು ಮಾಡುವ ವಿಧಾನವನ್ನು finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.