ಬೇಸಗೆಯಲ್ಲಿ ಊಟ ತಿಂಡಿ ಮಾಡುವುದಕ್ಕಿಂತ ವಿವಿಧ ಬಗೆಯ ಜ್ಯೂಸ್ ಕುಡಿಯಬೇಕು ಎನಿಸುತ್ತದೆ. ಆಗ ಪ್ಯಾಕ್ ಮಾಡಿಟ್ಟ ಪಾನೀಯದ ಬದಲು ನೈಸರ್ಗಿಕವಾಗಿ ತಯಾರಾಗುವ ಈ ಜ್ಯೂಸ್ ಮಾಡಿ ಕುಡಿಯಿರಿ. ಇದನ್ನು ಮಾಡುವುದಕ್ಕೆ ಬಹಳ ಸುಲಭ. finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಈ ರೆಸಿಪಿಯನ್ನು ಹಂಚಿಕೊಳ್ಳಲಾಗಿದೆ. ಬೇಸಗೆಯ ಬಿಸಿಗೆ ಇದ್ದೊಂದು ಬೆಸ್ಟ್ ರೆಸಿಪಿ ಅಷ್ಟೇ ಅಲ್ಲ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇಲ್ಲದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.