ಅನೇಕ ಜನರು ನಾಯಿ ಮತ್ತು ಬೆಕ್ಕುಗಳನ್ನು ಸಾಕುತ್ತಾರೆ ಮತ್ತು ಅವುಗಳನ್ನು ತುಂಬಾ ಪ್ರೀತಿಸುತ್ತಾರೆ. ಅವುಗಳಿಗಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂಬುದನ್ನು ನೀವು ನೋಡಿರಬಹುದು. ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಬೆಕ್ಕಿನ ಮರಿಗೆ ತನ್ನ ಬೊಗಸೆಯಲ್ಲಿ ನೀರು ತುಂಬಿ ನೀರು ಕುಡಿಸುತ್ತಿರುವುದನ್ನು ನೋಡಬಹುದು.