ದೇವನಹಳ್ಳಿಯ ಬೈರದೇನಹಳ್ಳಿ ಬಳಿ ಪಾಕ್ಸ್ಕಾನ್ ಐಪೋನ್ ಕಂಪನಿಯ ಕಾರ್ಮಿಕರ ಶೆಡ್ನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಈ ವೇಳೆ ಶೆಡ್ನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಅವಘಡದಲ್ಲಿ ಶೆಡ್ನಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಿಲಿಂಡರ್ ಸ್ಟೋಟದ ತೀವ್ರತೆಗೆ ಶೆಡ್ಗಳೆಲ್ಲ ನಜ್ಜುಗುಜ್ಜಾಗಿವೆ.