ಅಡುಗೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ಇರುವಾಗ ಊಟಕ್ಕೆ ಏನಾದರೂ ಕ್ವಿಕ್ ಆಗಿ ಮಾಡಬೇಕು ಅನಿಸಿದಾಗ ಈ ಒಂದು ರೆಸಿಪಿಯನ್ನು ಟ್ರೈ ಮಾಡಿ ನೋಡಬಹುದು. ಇದು ನಿಮಿಷಗಳಲ್ಲಿ ಯಾವುದೇ ರೀತಿಯ ಶ್ರಮವಹಿಸದೆಯೇ ದಹಿ ಕರಿ ರೆಡಿಯಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಕರುಳನ್ನು ತಂಪಾಗಿರಿಸುತ್ತದೆ. ಮೊಸರಿನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ತ್ವರಿತವಾಗಿ ತಯಾರಾಗುವ ಈ ರೆಸಿಪಿ ಮಾಡುವ ವಿಧಾನವನ್ನು living.with.niharika ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.