ದಾವಣಗೆರೆ ಜಿಲ್ಲೆ ಹರಿಹರದ ಗುತ್ತೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಸೊಂದು ಕಾಲುವೆಗೆ ನುಗ್ಗಿದೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 23 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬಳ್ಳಾರಿ ಕಡೆಯಿಂದ ಹರಿಹರಕ್ಕೆ ಬರುತ್ತಿದ್ದ ಸಾರಿಗೆ ಬಸ್ ಎದುರಿಗೆ ಬರ್ತಿದ್ದ ವಾಹನಕ್ಕೆ ದಾರಿ ಬಿಡಲು ಹೋಗಿ ಅಪಘಾತ ಸಂಭವಿಸಿದೆ.