ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ 55 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಲ್ಲಜ್ಜ ಮತ್ತು ಸಿದ್ದಜ್ಜಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಸಿದ್ದಜ್ಜಿ ವಯೋಸಹಜ ಕಾಯಿಲೆಯಿಂದ ನಿಧನರಾದ ಬೆನ್ನಲ್ಲೇ, ಅವರ ಪತಿ ಮಲ್ಲಜ್ಜ ಕೂಡ ಕೊನೆಯುಸಿರೆಳೆದಿದ್ದು, ಕುಟುಂಬ ಸದಸ್ಯರು ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಿದ್ದಾರೆ. ಈ ಘಟನೆ ಗ್ರಾಮಸ್ಥರಲ್ಲಿ ಭಾವುಕತೆ ಮೂಡಿಸಿದೆ.