ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ 37 ದಂಪತಿಗಳು ವಿಚ್ಛೇದನ ಪ್ರಕರಣಗಳಿಂದ ಹೊರಬಂದು ಮತ್ತೆ ಒಂದಾಗಲು ನಿರ್ಧರಿಸಿದರು. ಹಲವು ಕಾರಣಗಳಿಂದ ಪ್ರತ್ಯೇಕವಾಗಿದ್ದ ಈ ಜೋಡಿಗಳು ಪರಸ್ಪರ ಹಾರ ಬದಲಿಸಿಕೊಂಡು ಬದುಕು ಸಾಗಿಸಲು ಒಪ್ಪಿದರು. ನ್ಯಾಯಾಧೀಶ ಡಿ.ಕೆ.ವೇಲಾ ಅವರು ದಂಪತಿಗೆ ಶುಭ ಹಾರೈಸಿದರು.