ದಾವಣಗೆರೆ ನಗರದ ಮಂಡಿಪೇಟೆಯ ಶ್ರೀರಾಘವೇಂದ್ರ ಹಾರ್ಡ್ವೇರ್ ಅಂಗಡಿಯಲ್ಲಿ ಸುಮಾರು ಆರು ಅಡಿ ಉದ್ದದ ಕೆರೆ ಹಾವು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತು. ಮಾಹಿತಿ ಪಡೆದ ಸ್ನೇಕ್ ಬಸಣ್ಣ ಅವರು ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.