ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ತೀವ್ರ ಮಳೆಯ ಅಭಾವದಿಂದಾಗಿ ಕಾಡಿನೊಳಗಿನ ಕೆರೆ, ಹೊಂಡಗಳು ಒಣಗಿವೆ. ಬಿಸಿಲಿನ ತಾಪಕ್ಕೆ ನೀರು ಮತ್ತು ಮೇವಿಗಾಗಿ ಕಾಡಾನೆಗಳು ಹಾಗೂ ವನ್ಯಜೀವಿಗಳು ಅರಣ್ಯದಂಚಿನ ಗ್ರಾಮಗಳತ್ತ ಮುಖ ಮಾಡುತ್ತಿದ್ದು, ಉಬ್ರಾಣಿ-ಭದ್ರಾವತಿ ರಸ್ತೆ ಪಕ್ಕದ ಹೊಂಡದಲ್ಲಿ ಆನೆಯೊಂದು ನೀರಾಟವಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.