ಹಾಡಹಗಲೇ ಕಳ್ಳರು ಕೈಚಳಕ ತೋರಿದ್ದು, ನಂದಿನಿ ಹಾಲಿನ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಬನ್ನೇರುಘಟ್ಟ ಸಮೀಪದ ಮೈಲಸಂದ್ರದ ಎಸ್.ಆರ್.ವೈ ಲೇಔಟ್ನಲ್ಲಿ ನಡೆದಿದೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಹಾಲಿನ ಅಂಗಡಿಗೆ ಅವರು ತಿಂಡಿಗೆ ಹೋಗಿದ್ದ ಸಮಯ ನೋಡಿ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 32 ಸಾವಿರ ರೂ. ಹಣ ಎಗರಿಸಿದ್ದಾರೆ. ಕಳ್ಳನ ಕರಾಮತ್ತಿನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.