ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ವಿಶ್ವದ ಮೊದಲ ಡೆಂಗ್ಯೂ ಲಸಿಕೆ ‘ಕ್ಯುಡೆಂಗ’! 41 ದೇಶಗಳಲ್ಲಿ ಯಶಸ್ವಿಯಾಗಿರುವ ಈ ಲಸಿಕೆಯನ್ನು ಮೂರು ತಿಂಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುತ್ತದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಇದು ದೊಡ್ಡ ಮೈಲಿಗಲ್ಲಾಗಲಿದೆ. ಭಾರತದಲ್ಲಿ ಔಷಧ ನಿಯಂತ್ರಣ ಪ್ರಾಧಿಕಾರ ಇದಕ್ಕೆ ಸಮ್ಮತಿ ನೀಡುವುದು ಬಾಕಿ ಇದ್ದು, ಕ್ಲಿನಿಕಲ್ ಟ್ರಯಲ್ ನಡೆದು ಸಮ್ಮತಿ ಸಿಕ್ಕ ತಕ್ಷಣವೇ ಪೂರೈಕೆ ಶುರುವಾಗಲಿದೆ. ಹಾಗಾಗಿ ನಂತ್ರ ಸೊಳ್ಳೆ ಕಚ್ಚಿದರೆ ಹೆದರಬೇಕಾಗಿಲ್ಲ!