ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ 300 ವರ್ಷಗಳ ಇತಿಹಾಸವುಳ್ಳ ಮೌಕ್ತಿಕಾಂಬ ಅಮ್ಮನವರ ಕರಗ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ವಹ್ನಿಕುಲ ಕುಟುಂಬದವರು ರಾಜಮರ್ಯಾದೆಯೊಂದಿಗೆ ನಡೆಸಿಕೊಟ್ಟ ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹೂವುಗಳಿಂದ ಅಲಂಕೃತಗೊಂಡ ಕರಗವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವೈಭವದ ಸಂಪೂರ್ಣ ಮಾಹಿತಿ ಇಲ್ಲಿದೆ.