ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಮಾಸ್ಕ್ಮ್ಯಾನ್ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಪತ್ನಿ ಮಲ್ಲಿಕಾ ಹಾಗೂ ವಕೀಲರ ಜೊತೆ ಬಂದ ಚಿನ್ನಯ್ಯ ಬೆಳ್ತಂಗಡಿ SIT ಕಚೇರಿಗೂ ತೆರಳಿ ಸಹಿ ಹಾಕಿ ವಾಪಸ್ ತೆರಳಿದ್ದಾನೆ. ಬೇಲ್ ಸಿಕ್ಕಿ ಹಲವು ದಿನಗಳು ಕಳೆದರೂ ಸ್ಯೂರಿಟಿ ಕೊಡಲು ಯಾರೂ ಮುಂದಾಗದ ಹಿನ್ನೆಲೆ ಜೈಲಿನಲ್ಲೇ ಇದ್ದ ಚಿನ್ನಯ್ಯ ಕೆಲ ದಿನಗಳ ಹಿಂದಷ್ಟೇ ಹೊರಬಂದಿದ್ದ.