ಇಂದು (ಡಿಸೆಂಬರ್ 16) ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ 66ನೇ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಯೊಬ್ಬ ತನ್ನ ರಕ್ತದಲ್ಲೇ ಕುಮಾರಣ್ಣನ ಭಾವಚಿತ್ರ ಬಿಡಿಸಿ ಗಮನಸೆಳೆದಿದ್ದಾನೆ. ಧಾರವಾಡ ಗ್ರಾಮೀಣ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿಯಾಗಿರುವ ಪ್ರವೀಣ್ ಬ್ಯಾಳಿ ಎನ್ನುವರು ತಮ್ಮ ರಕ್ತದಲ್ಲಿ ಕುಮಾರಸ್ವಾಮಿಗ ಚಿತ್ರ ಬಿಡಿಸಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.