ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ನಲ್ಲಿರುವ ಒಡಿಶಾ ಶಾಸಕರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ. ರೆಸಾರ್ಟ್ಗೆ ಬಂದ ಡಿಕೆಯನ್ನು ಶಾಸಕರು ಆತ್ಮೀಯವಾಗಿ ಸ್ವಾಗತಿಸಿದ್ದು, ರೆಸಾರ್ಟ್ನಲ್ಲಿ ತಂಗಿರುವ ಒಡಿಶಾ ಪಿಸಿಸಿ ಅಧ್ಯಕ್ಷ ಸೇರಿ 9 ಶಾಸಕರ ಜೊತೆ ಡಿಸಿಎಂ & ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಡಿಸಿಎಂಗೆ ಶಾಸಕರಾದ ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್ ಸಾಥ್ ನೀಡಿದ್ದು, ಇದೇ ವೇಳೆ ವೀರಪ್ಪನ್ ಪುತ್ರಿ ವಿದ್ಯಾ ಡಿಕೆಶಿ ಭೇಟಿಯಾಗಿದ್ದಾರೆ.