ಕೆಎಸ್ಸಿಎ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸ್ಥೆ ಬೆಳೆಯುವ ಆಶಯ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಕಳೆದುಹೋಗಿರುವ ಪಂದ್ಯಗಳನ್ನು ವಾಪಸ್ ತರುವುದಾಗಿ ಹಾಗೂ 2026ರ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯುವುದನ್ನು ಖಚಿತಪಡಿಸುವುದಾಗಿ ಹೇಳಿದರು. ಯಾವುದೇ ಅವಘಡಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.