ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದಲ್ಲಿ ಕರಡಿಯೊಂದು ನಾಡಿಗೆ ನುಗ್ಗಿತ್ತು. ಶ್ವಾನವೊಂದು ಕರಡಿಯನ್ನು ಅಟ್ಟಾಡಿಸಿದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈಗಾಗಲೇ ಕಾಡಾನೆ ಹಾಗೂ ಚಿರತೆ ದಾಳಿಯಿಂದ ರೋಸಿ ಹೋಗಿದ್ದ ಗ್ರಾಮಸ್ಥರಿಗೆ ಈಗ ಕರಡಿ ದಾಳಿಯ ಆತಂಕ ಎದುರಾಗಿದೆ. ಮಾನವ-ಕಾಡುಪ್ರಾಣಿ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ಹೆಚ್ಚಾಗಿದೆ.