ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇಗುಲದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಶ್ವಾನವೊಂದು ದೇಗುಲದ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದ್ದು,ಇಂದು ಬೆಳಗ್ಗೆ 6.30 ರ ಸುಮಾರಿಗೆ ನಡೆದಿರುವ ಘಟನೆ ಕಂಡು ಭಕ್ತರು ವಿಸ್ಮಯಗೊಂಡಿದ್ದಾರೆ. ಸುಮಾರು 2 ಗಂಟೆ ಕಾಲ ಶ್ವಾನ ಗರ್ಭಗುಡಿ ಸುತ್ತಿರುವ ಮಾಹಿತಿ ಲಭ್ಯವಾಗಿದೆ.