ಸದಾ ಜತೆಯಾಗಿದ್ದ ಎತ್ತು ಮೃತಪಟ್ಟಿದ್ದಕ್ಕೆ ಶ್ವಾನವೊಂದು ಕಣ್ಣೀರು ಹಾಕಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಎಲ್ಲೇ ಹೋದರು ಸದಾ ತನ್ನ ನೆಚ್ಚಿನ ಎತ್ತಿನ ಜೊತೆಗಿರುತ್ತಿತ್ತು ಈ ಶ್ವಾನ. ಹೊಲದಲ್ಲಿ ಉಳುಮೆ ಮಾಡಲು ಹೋದಾಗ ಸದಾ ಜೊತೆಗಿರುತ್ತಿತ್ತು. ಎತ್ತು ಸತ್ತ ಮೇಲೆ ಅಂತ್ಯಸಂಸ್ಕಾರ ಮಾಡುವವರೆಗೂ ಜೊತೆಗಿದ್ದ ಶ್ವಾನದ ಪ್ರೀತಿ ಇದೀಗ ಗಮನ ಸೆಳೆದಿದೆ.