ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಎಂದು ಅಡ್ಡಹೆಸರಿಟ್ಟಿದ್ದ ಅಪರೂಪದ ಆಲ್ಬಿನೋ ಎಮ್ಮೆ ಬಕ್ರೀದ್ಗೆ ಬಲಿಯಾಗಲು ಮಾರಾಟವಾಗಿತ್ತು. ಆದರೆ, ಕೊನೆಗೆ ಅದನ್ನು ಬಲಿ ಕೊಡದೆ, ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವರದಿಗಳು ಬಂದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.