ಮಳೆಯ ಕೊರತೆಯಿಂದ ಕಂಗೆಟ್ಟಿರುವ ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮಸ್ಥರು ವರುಣ ದೇವನನ್ನು ಒಲಿಸಿಕೊಳ್ಳಲು ವಿಶೇಷ ಪ್ರಾರ್ಥನೆಗೆ ಮುಂದಾಗಿದ್ದಾರೆ. ಏಳು ದಿನಗಳ ಕಾಲ ಅಖಂಡ ಶಿವನಾಮ ಸಪ್ತಾಹವನ್ನು ಆಯೋಜಿಸಿದ್ದು, ಲಿಂಗ ಪೂಜೆ ಹಾಗೂ ಸಾಮೂಹಿಕ ಶಿವನಾಮ ಜಪದ ಮೂಲಕ ಮಳೆಗಾಗಿ ಮೊರೆ ಹೋಗಿದ್ದಾರೆ. ಸಮೃದ್ಧ ಮಳೆ ಸುರಿದು ಬರಗಾಲ ದೂರವಾಗಲೆಂದು ಗ್ರಾಮಸ್ಥರು ಹಾರೈಸುತ್ತಿದ್ದಾರೆ.