ಬಾಳೆಹಣ್ಣಿನ ಸೇವನೆ ಸಾಮಾನ್ಯವಾಗಿ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಮನೆಯಲ್ಲಿ ಬಾಳೆಹಣ್ಣು ತಂದಾಗ ಅಥವಾ ಪೂಜೆಗೆ ತಂದದ್ದು ಉಳಿದಾಗ ಏನು ಮಾಡುವುದು ಎಂಬ ಚಿಂತೆ ಆರಂಭವಾಗುತ್ತದೆ. ಆದರೆ ಈ ಒಂದು ರೆಸಿಪಿ ನಿಮಗೆ ತಿಳಿದಿದ್ದರೆ ಬಾಳೆಹಣ್ಣು ಎಂದಿಗೂ ಹಾಳಾಗುವುದಿಲ್ಲ. ಹೌದು, ಕೇವಲ ಬಾಳೆಹಣ್ಣನ್ನು ಕೊಚ್ಚಿ ಸೂರ್ಯನ ಬೆಳಕಿನಲ್ಲಿ ಒಣಗಿಸಿದರೆ ಸಾಕು ಸುಕೇಳಿ ತಯಾರಾಗುತ್ತದೆ. ಇದು ತಿನ್ನುವುದಕ್ಕೆ ಬಹಳ ರುಚಿಕರವಾಗಿದ್ದು ನೀವು ಒಮ್ಮೆ ಟ್ರೈ ಮಾಡಿ ನೋಡಬಹುದು. ಇದನ್ನು finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಬಹಳ ಸುಲಭ ರೆಸಿಪಿಯಾಗಿದ್ದು ಟ್ರೈ ಮಾಡಿ ನೋಡಿ.