ಹೊಸೂರು ಸಮೀಪದ ಶಾನಮಾವು ಬಳಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೇಕಲ್ ಗಡಿಭಾಗದ ಗ್ರಾಮಗಳಿಗೆ ನುಗ್ಗಿ ರಾಗಿ, ಭತ್ತ ಸೇರಿ ಹಲವು ಬೆಳೆಗಳನ್ನು ನಾಶಪಡಿಸುತ್ತಿದ್ದ ಈ ಆನೆಗಳನ್ನು ಡೆಂಕಣಿಕೋಟೆ ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪಟಾಕಿ ಬಳಸಿ ಯಶಸ್ವಿಯಾಗಿದೆ. ಥರ್ಮಲ್ ಡ್ರೋನ್ ಈ ದೃಶ್ಯಗಳನ್ನು ಸೆರೆಹಿಡಿದಿದೆ.