ಕುಡಿದ ಮತ್ತಲ್ಲಿ ಮೊಬೈಲ್ ಟವರ್ ಏರಿ ವ್ಯಕ್ತಿಯೋರ್ವ ಹುಚ್ಚಾಟ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ. ಅರ್ಜುನ್ ನಾಟಿಕಾರ್ ಟವರ್ ಏರಿದ ಭೂಪನಾಗಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಟವರ್ ತುದಿಯಲ್ಲಿ ನಿಂತಿದ್ದಾನೆ. ಮೇಲೆ ನಿಂತು ಕೈ ಮುಗಿದು, ಫೋನ್ ಹಿಡಿದು ಫೋಸ್ ಕೊಟ್ಟಿದ್ದಾನೆ. ಹರಸಾಹಸ ಮಾಡಿ ಆತನನ್ನು ಗ್ರಾಮಸ್ಥರು ಕೆಳಗೆ ಇಳಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.